ಯೋಗನಿದ್ರೆಯು ದೈಹಿಕ-ಮಾನಸಿಕ-ಭಾವನಾತ್ಮಕ ವಲಯದಲ್ಲಿ ಸಮತೋಲನವನ್ನು, ವಿಶ್ರಾಂತಿಯನ್ನು  ಉಂಟುಮಾಡುವ ಅದ್ಭುತವಾದ ಯೋಗಪ್ರಕ್ರಿಯೆಯಾಗಿದೆ. ಯೋಗನಿದ್ರೆಯು ಸಂಪೂರ್ಣ ವಿಶ್ರಾಮದ ಅರಿವಿನ ಸ್ಥಿತಿ. ಇದು ಎಚ್ಚರ ಹಾಗು ನಿದ್ರೆಯ ನಡುವಿನ ಪ್ರಜ್ಞಾ ಸ್ಥಿತಿ. ಉತ್ತಮ ಆರೋಗ್ಯ ಮತ್ತು ಯಶಸ್ವೀ ಜೀವನಕ್ಕೆ ಯೋಗನಿದ್ರೆಯು ಅತ್ಯದ್ಭುತ ಸಾಧನವಾಗಿದೆ.

ಯೋಗ ನಿದ್ರೆಯ ಸಮರ್ಪಕ ವಿಶ್ರಾಂತಿಯಿಂದ ದೊರಕುವ ಮಾನಸಿಕ ಸಂತುಲನೆಯು ಯಾವುದೇ ಪರಿಸ್ಥಿತಿಯನ್ನು ಶಾಂತ ಹಾಗೂ ಸಮಾಧಾನ ಚಿತ್ತದಿಂದ ನಿಭಾಯಿಸಲು ಶಕ್ತಿಯನ್ನು ತುಂಬುತ್ತದೆ.  ಇದು ಕುಟುಂಬದಲ್ಲಿ, ಉದ್ಯೋಗದಲ್ಲಿ, ವ್ಯವಹಾರದಲ್ಲಿ ಸಾಮರಸ್ಯವನ್ನು ಬಲಪಡಿಸಲು, ಯಶಸ್ಸನ್ನು ಗಳಿಸಲು ಸಹಾಯಮಾಡುತ್ತದೆ.

ಈ ಯೋಗನಿದ್ರೆಯು ನಮ್ಮೆಲ್ಲರಿಗೂ ಎನರ್ಜಿ ಬೂಸ್ಟರ್  ಆಗಿದ್ದು  ಸೃಜನಶೀಲತೆ, ಸಕಾರಾತ್ಮಕತೆ ಮತ್ತು ಉತ್ತಮ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಈ ಯೊಗನಿದ್ರೆಯು ಒತ್ತಡವನ್ನು ಹೊಡೆದೋಡಿಸಲು ರಾಮ ಬಾಣವಾಗಿದೆ.

ನಿಯಮಿತ ಯೋಗ ನಿದ್ರೆಯ ಅಭ್ಯಾಸ ದಿಂದ ನವಚೈತನ್ಯ, ತಾಜಾತನ, ಲವಲವಿಕೆ, ನವೋಲ್ಲಾಸ, ಶಾಂತಿ, ಸಮಾಧಾನ, ಸಾಮರಸ್ಯ, ಸಮೃದ್ಧಿ, ಆತ್ಮವಿಶ್ವಾಸ ಹಾಗು ಆತ್ಮಾನಂದದ ಅನುಭವವನ್ನು ಪಡೆಯಬಹುದು.

Disclaimer: This video is created for Healing, Relaxation purposes only. 
NOTE: This video cannot replace any medication or professional treatment.