ಯೋಗನಿದ್ರಾ ಹೀಲಿಂಗ್

5 Days Online Training

ಯೋಗನಿದ್ರಾ ಹೀಲಿಂಗ್

Balance Body-Mind, Achieve Radiant Health

5 ದಿನದ ಆನ್ಲೈನ್ ತರಬೇತಿ ಶಿಬಿರ

Mon, 12 Oct to Fri, 16 Oct, 2020

Everyday Morning 5:30 am to 7:00 am

ಮಾರ್ಗದರ್ಶನ : ಶ್ರೀ ವಿಶ್ವನಾಥ ಗುರೂಜಿ

 ಶಿಬಿರದ ಪ್ರಯೋಜನ ಸಾಧ್ಯತೆಗಳು:

  • ದೇಹ, ಮನಸ್ಸು ಮತ್ತು ಭಾವನೆಯಲ್ಲಿ ಸಮತ್ವವನ್ನುಹೊಂದುವುದು
  • ಸುಪ್ತಮನಸ್ಸಿನ ಆಳಸ್ಥಿತಿಯನ್ನು ತಲುಪುವುದು
  • ಸಮಾಧಾನ ಹಾಗು ಶಾಂತಮನಸ್ಸಿನ ಸ್ಥಿತಿಯನ್ನು ಪಡೆದುಕೊಳ್ಳುವುದು
  • ಆರೋಗ್ಯಪೂರ್ಣ ನಿದ್ರೆಯನ್ನು ಹೊಂದುವುದು
  • ನಿಮ್ಮೊಳಗಿನ ಚಿಕಿತ್ಸಕಾ ಶಕ್ತಿಯನ್ನು ಪ್ರೇರೇಪಿಸುವುದು
  • ಸೃಜನಶೀಲತೆ, ವಿಶ್ವಾಸ ಮತ್ತು ತಾಳ್ಮೆಯನ್ನು ವೃದ್ಧಿಗೊಳಿಸುವುದು

ಯೋಗನಿದ್ರಾ ಚಿಕಿತ್ಸೆ

ದೈಹಿಕ-ಮಾನಸಿಕ-ಭಾವನಾತ್ಮಕ ವಿಶ್ರಾಂತಿಯನ್ನು ವ್ಯವಸ್ಥಿತವಾಗಿ ಉಂಟುಮಾಡುವ ಅದ್ಭುತವಾದ ಯೋಗಪ್ರಕ್ರಿಯೆಯೇ ಈ ಯೋಗನಿದ್ರೆ. ಯೋಗನಿದ್ರೆಯೆಂದರೆ ಸಂಪೂರ್ಣ ವಿಶ್ರಾಮದ ಜಾಗೃತ ಸ್ಥಿತಿ. ಇದು ಎಚ್ಚರ ಹಾಗು ನಿದ್ರೆಯ ನಡುವಿನ ಪ್ರಜ್ಞಾ ಸ್ಥಿತಿ. ಜಾಣ್ನುಡಿಯಂತೆ “ಆರೋಗ್ಯಕರ ನಿದ್ರೆಯನ್ನು ಮಾಡಲು ಅರಿತವರಿಗೆ ಯಾವುದೇ ಔಷಧಿಗಳ ಅವಶ್ಯಕತೆ ಇರುವುದಿಲ್ಲ”. ಉತ್ತಮ ಆರೋಗ್ಯ ಮತ್ತು ಯಶಸ್ವೀ ಜೀವನಕ್ಕೆ ಯೋಗನಿದ್ರೆಯು ಅತ್ಯದ್ಭುತ ಸಾಧನವಾಗಿದೆ.

ನಿಯಮಿತ ಯೋಗ ನಿದ್ರೆಯ ಅಭ್ಯಾಸ ದಿಂದ ನವಚೈತನ್ಯ, ತಾಜಾತನ, ಲವಲವಿಕೆ, ನವೋಲ್ಲಾಸ, ಶಾಂತಿ, ಸಮಾಧಾನ, ಸಾಮರಸ್ಯ, ಸಮೃದ್ಧಿ, ಆತ್ಮವಿಶ್ವಾಸ ಹಾಗು ಆತ್ಮಾನಂದದ ಅನುಭವವನ್ನು ಪಡೆಯಬಹುದು.

ಯೋಗ ನಿದ್ರೆಯ ಸಮರ್ಪಕ ವಿಶ್ರಾಂತಿಯಿಂದ ದೊರಕುವ ಮಾನಸಿಕ ಸಂತುಲನೆಯು ಯಾವುದೇ ಪರಿಸ್ಥಿತಿಯನ್ನು ಶಾಂತ ಹಾಗೂ ಸಮಾಧಾನ ಚಿತ್ತದಿಂದ ನಿಭಾಯಿಸಲು ಶಕ್ತಿಯನ್ನು ತುಂಬುತ್ತದೆ.  ಇದು ಕುಟುಂಬದಲ್ಲಿ, ಉದ್ಯೋಗದಲ್ಲಿ, ವ್ಯವಹಾರದಲ್ಲಿ ಸಾಮರಸ್ಯವನ್ನು ಬಲಪಡಿಸಲು, ಯಶಸ್ಸನ್ನು ಗಳಿಸಲು ಸಹಾಯಮಾಡುತ್ತದೆ.

ಯೋಗನಿದ್ರೆಯ ಸುಪ್ತಸ್ಥಿತಿಯು ಎಲ್ಲಾ ಅಡೆತಡೆಗಳನ್ನು ನಿವಾರಿಸಿಸುತ್ತದೆ. ಈಮನಸ್ಥಿತಿಯಲ್ಲಿ ಸಂಕಲ್ಪಗಳನ್ನು ಸುಪ್ತಮನಸ್ಸಿನಾಳದಲ್ಲಿ ಬಿತ್ತಬಹುದು,  ಹಾಗು ಆನಂದದಾಯಕ ಸುಖಮಯ ಜೀವನವನ್ನು ಹೊಂದಬಹುದು.

ಈ ಯೋಗನಿದ್ರೆಯು ನಮ್ಮೆಲ್ಲರಿಗೂ ಎನರ್ಜಿ ಬೂಸ್ಟ ರ್ಆಗಿದ್ದು ಸೃಜನಶೀಲತೆ, ಸಕಾರಾತ್ಮಕತೆ ಮತ್ತು ಉತ್ತಮ ಕಾರ್ಯನಿರ್ವಹಿಸುವಲ್ಲಿ ಸಹಕಾರಿಯಾಗಿದೆ. ಈ ಯೊಗನಿದ್ರೆಯು ಒತ್ತಡವನ್ನು ಹೊಡೆದೋಡಿಸಲು ರಾಮ ಬಾಣವಾಗಿದೆ.

ಶ್ರೀ ವಿಶ್ವನಾಥ ಗುರೂಜಿಯವರು ಯೋಗನಿದ್ರಾ ಹೀಲಿಂಗ್ ಧ್ಯಾನವನ್ನು ನಮ್ಮಲ್ಲಿ ಅರಿವನ್ನು ಜಾಗೃತಗೊಳಿಸಲು ವಿಶಿಷ್ಟವಾದ ರೀತಿಯಲ್ಲಿ ರೂಪಿಸಿರುತ್ತಾರೆ.  7 ದಿನಗಳ ಶಿಬಿರದಲ್ಲಿ ಗುರೂಜಿಯವರು ಇಂಟರ್ನೆಟ್ ಮೂಲಕ  ನೇರವಾಗಿ ಮಾರ್ಗದರ್ಶನ ನೀಡುತ್ತಾರೆ.

ಹೆಚ್ಚಿನ ಮಾಹಿತಿ ಹಾಗು ನೊಂದಣಿಗಾಗಿ ಸಂಪರ್ಕಿಸಿ: 7259958573, 9880053755

 Energy Exchange: INR 750/-

Medium of Instruction: Kannada and English

ಇಂಟರ್ನೆಟ್ ಮೂಲಕ ನೊಂದಾಯಿಸಲು:

 For GooglePay / PayTM / PhonePe – Mobile Number: 9845334027

Note: Inform us with the transaction id once you register.

Organised by: Spiritual Solutions, Bengaluru